ಅರ್ಚನಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ನಟಿ. ಅವರು ಈ ಹೃದಯ ನಿನಗಾಗಿ (೧೯೯೬), ಎ (೧೯೯೮), ಫೂಲ್ ಔರ್ ಆಗ್ (೧೯೯೯) ಮತ್ತು ಯಜಮಾನ (೨೦೦೦) ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. == ವೃತ್ತಿ == ಅರ್ಚನಾ ಮರಾಠಿ ಭಾಷೆಯನ್ನು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಅವರು ೧೯೯೬ ರಲ್ಲಿ ಶಿವ ರಾಜ್‌ಕುಮಾರ್ ಜೊತೆಗಿನ ಆದಿತ್ಯ ಎಂಬ ಕನ್ನಡ ಚಲನಚಿತ್ರದಲ್ಲಿ ಸಿನೆಮಾ ರಂಗಕ್ಕೆ ಪ್ರವೇಶ ಮಾಡಿದರು. ಅವರು ೧೯೯೯ ರಲ್ಲಿ ಫೂಲ್ ಔರ್ ಆಗ್ ಚಿತ್ರದಲ್ಲಿ ಮಿಥುನ್ ಚಕ್ರವರ್ತಿಯೊಂದಿಗೆ ಜೋಡಿಯಾಗಿದ್ದರು. ನಟಿಯಾಗಿ ತಮ್ಮ ವೃತ್ತಿಜೀವನದಲ್ಲಿ, ಅರ್ಚನಾ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. == ಆಯ್ದ ಚಿತ್ರಕಥೆ == ಅರ್ಚನಾ ಅವರು ನಟಿಸಿದ ಚಲನಚಿತ್ರಗಳು: ಆದಿತ್ಯ (೧೯೯೬) ಈ ಹೃದಯ ನಿನಗಾಗಿ (೧೯೯೭) ಮೇಘಾ ಬಂತು ಮೇಘಾ (೧೯೯೮) ಮಾರಿ ಕಣ್ಣು ಹೋರಿ ಮ್ಯಾಗೆ (೧೯೯೮) ಎ (೧೯೯೮) ಫೂಲ್ ಔರ್ ಆಗ್ (೧೯೯೯) ಯಜಮಾನ (೨೦೦೦) ನೀಲಾಂಬರಿ (೨೦೦೧) ತಮಾಷೆಗಾಗಿ (೨೦೦೭) ಸಿಬಿಐ ಸತ್ಯ (೨೦೧೬) == ಉಲ್ಲೇಖಗಳು ==